ಬಿಲಿಯರ್ಡ್ಸ್: ಸೆಮಿಫೈನಲ್‌ಗೆ ಪಂಕಜ್‌ ಬೆಂಗಳೂರು: ಪಂಕಜ್ ಅಡ್ವಾನಿ ಅವರು ಇಲ್ಲಿ ನಡೆಯುತ್ತಿರುವ ಜಿ.ರಾಮನ್ ನಾಯರ್‌ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿದರು. ಇಸಿಎ ಕ್ಲಬ್‌ ಆವರಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಅವರು ರೂಪೇಶ್ ಶಾ ವಿರುದ್ಧ 100–0ಯಿಂದ ಗೆದ್ದರು. ಬುಧವಾರದ ಪಂದ್ಯದಲ್ಲಿ ಶಾ 562 ಪಾಯಿಂಟ್‌ ಗಳಿಸಿ ಗಮನ ಸೆಳೆದಿದ್ದರು. ಆದರೆ ಪಂಕಜ್‌ಗೆ ಉತ್ತರ ನೀಡಲಾಗದೆ ಸೋಲೊಪ್ಪಿಕೊಂಡರು. ಮೊದಲು 381 ಪಾಯಿಂಟ್‌ ಗಳಿಸಿದ ಅಡ್ವಾನಿ ನಂತರ ಇನ್ನಷ್ಟು ಪ್ರಭಾವಿ ಆಟವಾಡಿ 675 ಪಾಯಿಂಟ್ ಕಲೆ ಹಾಕಿದರು. ಯುವ ಆಟಗಾರ ಧ್ವಜ್‌ ಹರಿಯಾ 100–0 (291, 88, 115, 139, 160) ಅಂತರದಿಂದ ವೆಂಕಟೇಶ್ವರನ್‌ ವಿರುದ್ಧ ಗೆದ್ದು ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.