ಬ್ಯಾಡ್ಮಿಂಟನ್‌: ಆಲಾಪ್, ಆಕರ್ಷಿಣಿ ಫೈನಲ್‌ಗೆ ಬೆಂಗಳೂರು: ಆಲಾಪ್ ಮಿಶ್ರಾ ಮತ್ತು ಆಕರ್ಷಿಣಿ ಕಶ್ಯಪ್‌ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ರ‍್ಯಾಂಕಿಂಗ್‌ ಸೀನಿಯರ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಸುತ್ತು ಪ್ರವೇಶಿಸಿದರು. ಶ್ರೇಯಾಂಕ ರಹಿತ ಆಟಗಾರ, ಮಧ್ಯಪ್ರದೇಶದ ಆಲಾಪ್‌ ಅವರು ಸೆಮಿಫೈನಲ್‌ನಲ್ಲಿ ಮಹಾರಾಷ್ಟ್ರದ ಸಿದ್ಧಾರ್ಥ ಠಾಕೂರ್‌ ಎದುರು 15–21, 21–11, 21–14ರಿಂದ ಗೆದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಏರ್ ಇಂಡಿಯಾದ ಚಿರಾಗ್ ಸೇನ್ ಅವರನ್ನು 21–14, 20–22, 21–16ರಿಂದ ಮಣಿಸಿದರು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಏರ್ ಇಂಡಿಯಾದ ಆಕರ್ಷಿಣಿ, ಮಧ್ಯಪ್ರದೇಶದ ಶ್ರೀಯಾಂಶಿ ಅವರನ್ನು 14–21, 21–19, 21–15ರಿಂದ ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದರು. ನಾ‌ಲ್ಕರ ಘಟ್ಟದ ಪಂದ್ಯದಲ್ಲಿ ಗೋವಾದ ಅನುರಾ ಪ್ರಭುದೇಸಾಯಿ ಅವರನ್ನು 21–13, 21–13ರಿಂದ ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.