ಕಬಡ್ಡಿ: ಯೋಧಾಗೆ ಒಲಿದ ಜಯ ಪಂಚಕುಲಾ: ಯು.ಪಿ. ಯೋಧಾ ತಂಡವು ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಭಾನುವಾರ ಜಯಿಸಿತು. ತಾವೂ ದೇವಿಲಾಲ್ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಯೋಧಾ ತಂಡವು 47–31 ರಿಂದ ಪಟ್ನಾ ಪೈರೆಟ್ಸ್‌ ವಿರುದ್ಧ ಗೆದ್ದಿತು. ಯೋಧಾ ತಂಡದಲ್ಲಿರುವ ಕನ್ನಡಿಗ ಪ್ರಶಾಂತ್ ಕುಮಾರ್ ರೈ ಆಲ್‌ರೌಂಡ್ ಆಟವಾಡಿದರು. ರೇಡಿಂಗ್‌ನಲ್ಲಿ ಏಳು, ಟ್ಯಾಕಲ್‌ನಲ್ಲಿ ಒಂದು ಮತ್ತು ಮೂರು ಬೋನಸ್‌ ಅಂಕಗಳನ್ನು ಗಳಿಸಿದರು. ಶ್ರೀಕಾಂತ್ ಜಾಧವ್ ಎಂಟು ಅಂಕಗಳನ್ನು ತಂಡಕ್ಕೆ ಕಾಣಿಕೆ ನೀಡಿದರು. ಅಜಾದ್ ಸಿಂಗ್ ರೇಡಿಂಗ್‌ನಲ್ಲಿ ಏಳು ಮತ್ತು ಒಂದು ಬೋನಸ್ ಅಂಕ ಪಡೆದರು. ರಕ್ಷಣಾ ವಿಭಾಗದಲ್ಲಿ ಮಿಂಚಿದ ಸಚಿನ್ ಕುಮಾರ್ ಮತ್ತು ಜೀವಾ ಕುಮಾರ ಅವರು ಕ್ರಮವಾಗಿ ಐದು ಮತ್ತು ನಾಲ್ಕು ಅಂಕಗಳನ್ನು ಗಳಿಸಿದರು. ಪಟ್ನಾ ತಂಡದ ಮಂಜೀತ್ ಹತ್ತು ಅಂಕ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.