ಸಿಪಿಎಲ್‌ ಚೆಸ್‌ 30ರಂದು ಬೆಂಗಳೂರು: ಚೆಸ್‌ ಪ್ರಮೋಟಿಂಗ್‌ ಲೀಗ್‌ (ಸಿಪಿಎಲ್‌) ಮೂರನೇ ಆವೃತ್ತಿಯ ಸ್ಪರ್ಧೆಗಳು ಇದೇ 30ರಂದು ನೃಪತುಂಗ ರಸ್ತೆಯ ವೈಎಂಸಿಎ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯ ಚೆಸ್‌ ಸಂಸ್ಥೆಗಳ ಒಕ್ಕೂಟ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್‌ ಸಂಸ್ಥೆಗಳು ಲೀಗ್‌ ಆಯೋಜಿಸಿವೆ. ವಿಜೇತರಿಗೆ ₹ 20 ಸಾವಿರ, ಎರಡನೇ ಸ್ಥಾನ ಪಡೆದವರಿಗೆ ₹ 15 ಸಾವಿರ ಹಾಗೂ ಮೂರನೇ ಸ್ಥಾನ ಪಡೆದವರಿಗೆ ₹10 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ಮಾಹಿತಿಗೆ .@. ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.