ಸ್ಕ್ವಾಷ್‌: ಶುಭಾರಂಭ ಮಾಡಿದ ವಿಕ್ರಂ ಮುಂಬೈ: ಮಹಾರಾಷ್ಟ್ರದ ವಿಕ್ರಂ ಮಲ್ಹೋತ್ರ, ಸಿಸಿಐ ವೆಸ್ಟರ್ನ್‌ ಇಂಡಿಯಾ ಓಪನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ಆಟಗಾರ ವಿಕ್ರಂ 11–7, 11–9, 11–6ರಲ್ಲಿ ಕುಂಜ್‌ ರಾವಾನಿ ಅವರನ್ನು ಸೋಲಿಸಿದರು. ಇತರ ಪಂದ್ಯಗಳಲ್ಲಿ ಯಶ್‌ ಫಡ್ತೆ 5–11, 11–5, 11–9, 11–7ರಲ್ಲಿ ರಾಹುಲ್‌ ಬೈಥಾ ಎದುರೂ, ವಿಕಾಸ್‌ ಮೆಹ್ರಾ 11–6, 11–7, 6–11, 11–5ರಲ್ಲಿ ಅನುಜ್‌ ಉನದ್ಕತ್‌ ಮೇಲೂ, ರಂಜಿತ್‌ ಸಿಂಗ್‌ 11–7, 11–13, 11–6, 11–4ರಲ್ಲಿ ನವೀನ್‌ ಜಾಂಗ್ರಾ ವಿರುದ್ಧವೂ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.