ಸೆಮಿಫೈನಲ್‌ಗೆ ಕೊಡಗು ತಂಡ ಮೈಸೂರು: ಉತ್ತಮ ಆಟವಾಡಿದ ಕೊಡಗು ಜಿಲ್ಲಾ ತಂಡದವರು ‘ಹಾಕಿ ಮೈಸೂರು’ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಆಹ್ವಾನಿತ ಹಾಕಿ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು. ಮೈಸೂರು ವಿ.ವಿ. ಹಾಕಿ ಕ್ರೀಡಾಂಗಣದಲ್ಲಿ ಗುರುವಾರ ತಾನಾಡಿದ ಎರಡೂ ಪಂದ್ಯಗಳಲ್ಲಿ ಗೆದ್ದ ಕೊಡಗು ತಂಡ ಒಟ್ಟು ಆರು ಪಾಯಿಂಟ್‌ಗಳೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಬೆಳಿಗ್ಗೆ ನಡೆದ ಪಂದ್ಯದಲ್ಲಿ ಕೊಡಗು ತಂಡ 7–0 ಗೋಲುಗಳಿಂದ ಬಳ್ಳಾರಿ ತಂಡವನ್ನು ಮಣಿಸಿದರೆ, ಎರಡನೇ ಪಂದ್ಯದಲ್ಲಿ 6–1 ರಲ್ಲಿ ಹುಬ್ಬಳ್ಳಿ ವಿರುದ್ಧ ಜಯ ಸಾಧಿಸಿತು. ದಿನದ ಇತರ ಪಂದ್ಯಗಳಲ್ಲಿ ತುಮಕೂರು ತಂಡ 2–1 ರಲ್ಲಿ ಬೆಳಗಾವಿ ವಿರುದ್ಧ, ಶಿವಮೊಗ್ಗ ತಂಡ 8–1 ರಲ್ಲಿ ಕಲಬುರ್ಗಿ ವಿರುದ್ಧ ಜಯ ಸಾಧಿಸಿದವು. ಗದಗ– ಧಾರವಾಡ ಮತ್ತು ಶಿವಮೊಗ್ಗ– ಮಂಗಳೂರು ತಂಡಗಳ ನಡುವಿನ ಪಂದ್ಯಗಳು 1–1 ಗೋಲಿನ ಡ್ರಾದಲ್ಲಿ ಅಂತ್ಯಕಂಡವು. ಸೆ.23ರ ವರೆಗೆ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.