ಟೋಕಿಯೊ ಒಲಿಂಪಿಕ್ಸ್ ಬಜೆಟ್‌: ಮೊತ್ತದಲ್ಲಿ ಇಲ್ಲ ಬದಲಾವಣೆ ಟೋಕಿಯೊ: 2020ರ ಒಲಿಂಪಿಕ್ಸ್‌ ಆಯೋಜನಾ ಸಮಿತಿಯು ಕೂಟಕ್ಕೆ ವೆಚ್ಚ ಮಾಡುವ ಮೊತ್ತದ ಮಾಹಿತಿಯನ್ನು ಒದಗಿಸಿದೆ. ವೆಚ್ಚ ಹೆಚ್ಚಿಸದೇ ಇರಲು ಒತ್ತಡಹೆಚ್ಚಿದ ಕಾರಣ, ಈ ಹಿಂದೆ ನೀಡಿದ ಮೊತ್ತದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಕಳೆದ ವರ್ಷ ₹ 84 ಸಾವಿರ ಕೋಟಿ ಮೊತ್ತದ ಬಜೆಟ್‌ ಮಂಡಿಸಲಾಗಿತ್ತು. ಅತ್ಯಾಧುನಿಕ ಕ್ರೀಡಾಂಗಣ ನಿರ್ಮಾಣದ ವೆಚ್ಚವನ್ನೂ ಇದರಲ್ಲಿಸೇರಿಸಲಾಗಿತ್ತು. ವೆಚ್ಚವನ್ನು ಹೆಚ್ಚಿಸಿ ಟೋಕಿಯೊದಲ್ಲಿ ಮೂಲಸೌಲಭ್ಯ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ವೆಚ್ಚ ಹೆಚ್ಚಿಸದೇ ಇರಲು ಆಯೋಜಕರು ನಿರ್ಧರಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.