ಜೂನಿಯರ್‌ ಮಹಿಳಾ ತಂಡ ರನ್ನರ್‌ಅಪ್‌ ಬೆಂಗಳೂರು: ರಾಜಸ್ತಾನದ ಬಿಕಾನೇರ್‌ ನಲ್ಲಿ ನಡೆದ ರಾಷ್ಟ್ರೀಯ 24ನೇ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನ ಜೂನಿಯರ್‌ ಮಹಿಳಾ ತಂಡ ವಿಭಾಗದಲ್ಲಿ ಕರ್ನಾಟಕ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದೆ. ಶನಿವಾರ ಮುಕ್ತಾಯವಾದ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯಕ್ಕೆ ಒಟ್ಟು ಎಂಟು ಪದಕಗಳು (4 ಚಿನ್ನ, 1 ಬೆಳ್ಳಿ ಹಾಗೂ 3 ಕಂಚು) ಒಲಿದವು. 20 ಕಿ.ಮೀ. ಟೈಮ್‌ ಟ್ರಯಲ್‌ನಲ್ಲಿ ಸಹನಾ ಕುಡಿಗನೂರ, ಸೌಮ್ಯ ಅಂತಾ ಪುರ, ದಾನಮ್ಮಾ ಚಿಚಕಂಡಿ ಹಾಗೂ ಕೀರ್ತಿ ರಂಗಸ್ವಾಮಿ ಅವರನ್ನೊಳಗೊಂಡ ತಂಡ ಚಿನ್ನ ಗೆದ್ದಿತ್ತು. 31 ನಿಮಿಷ 19.78 ಸೆಕೆಂಡುಗಳಲ್ಲಿ ತಂಡ ಗುರಿ ತಲುಪಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.