ಸ್ನೂಕರ್‌: ಸೌರವ್‌ ಗೆಲುವಿನ ಓಟ ಕೋಲ್ಕತ್ತ: ಭಾರತದ ಸೌರವ್‌ ಕೊಠಾರಿ, ಈಜಿಪ್ಟ್‌ನ ಮರ್ಸಾ ಆಲಮ್‌ನಲ್ಲಿ ನಡೆಯುತ್ತಿರುವ ಐಬಿಎಸ್‌ಎಫ್‌ ವಿಶ್ವ 6 ರೆಡ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಸೌರವ್‌ 32ರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಗುರುವಾರ ನಡೆದ ನಾಕೌಟ್‌ ಹಂತದ ಹಣಾಹಣಿಯಲ್ಲಿ ಸೌರವ್‌ 4–0 ಯಿಂದ ಈಜಿಪ್ಟ್‌ನ ಅಬ್ದುಲ್‌ ರಹಮಾನ್‌ ಶಾಹಿನ್‌ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.