ಕಾಮನ್‌ವೆಲ್ತ್‌ ಕರಾಟೆ ಜಾಗೃತ್‌ ಚಾಂಪಿಯನ್‌ ಬೆಂಗಳೂರು: ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್‌ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಎಂ.ಪಿ.ಜಾಗೃತ್‌ ಚಿನ್ನದ ಪದಕ ಜಯಿಸಿದ್ದಾರೆ. ಕಾತಾ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಕುಮಿತೆ ವಿಭಾಗದಲ್ಲಿ ಬೆಳ್ಳಿಯ ಪದಕ ಗಳಿಸಿದ್ದಾರೆ. ಬಲ್ಗೇರಿಯಾದ ಸೋಫಿಯಾದಲ್ಲಿ ಇತ್ತೀಚೆಗೆ ನಡೆದಿದ್ದ ಕರಾಟೆ ಯೂತ್‌ ಪ್ರೀಮಿಯರ್‌ ಲೀಗ್‌ನಲ್ಲಿ ಜಾಗೃತ್‌ ಬೆಳ್ಳಿ ಪದಕ ಗೆದ್ದಿದ್ದರು. ‘ಪದಕಗಳನ್ನು ಗೆದ್ದಿರುವುದರಿಂದ ಸಂತಸವಾಗಿದೆ. ಇಷ್ಟರಿಂದಲೇ ನಾನು ತೃಪ್ತನಾಗುವುದಿಲ್ಲ. ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವುದು ನನ್ನ ಗುರಿ. ಭಾರತದಲ್ಲಿ ಹೆಚ್ಚು ಹೆಸರಿಲ್ಲದ ಈ ಸಮರ ಕಲೆಯನ್ನು ಜನಪ್ರಿಯಗೊಳಿಸುವುದು ನನ್ನ ಕನಸು’ ಎಂದು ಜಾಗೃತ್ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.