ಬ್ಯಾಡ್ಮಿಂಟನ್‌: ನಿಖಿತಾ–ಜಾಗೃತಿಗೆ ಗೆಲುವು ಬೆಂಗಳೂರು: ನಿಖಿತಾ ರಾಮಕೃಷ್ಣ– ಕುಮಾರಿ ಜಾಗೃತಿ ಜೋಡಿಯು ರೆಡ್‌ ಬುಲ್‌ ಶಟಲ್ಸ್ ಅಪ್‌ ಬ್ಯಾಡ್ಮಿಂಟನ್‌ ಟೂರ್ನಿಯ ಬೆಂಗಳೂರು ಕ್ವಾಲಿ ಫೈಯರ್ಸ್ ಜಯಿಸಿದರು. ಇದರೊಂದಿಗೆ ರಾಷ್ಟ್ರೀಯ ಫೈನಲ್ಸ್‌ಗೆ ಅರ್ಹತೆ ಗಳಿಸಿದರು. ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಅವರು ಪೂಜಿತಾ ಹಾಗೂ ನಿಹಾರಿಕಾ ಶ್ರೀಧರ್‌ ಜೋಡಿಯನ್ನು 11–8, 11–4ರಿಂದ ಸೋಲಿಸಿದರು. ರಾಷ್ಟ್ರೀಯ ಫೈನಲ್ಸ್ ಟೂರ್ನಿಯು ಡಿಸೆಂಬರ್‌ 8ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.