ಶುಮಾಕರ್‌ಗೆ 50 ಮ್ಯಾರನೆಲ್ಲೊ (ಎಎಫ್‌ಪಿ): ಫಾರ್ಮುಲಾ ಒನ್‌ ಚಾಲಕ ಮೈಕಲ್‌ ಶುಮಾಕರ್‌ ಅವರು ಗುರುವಾರ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶುಮಾಕರ್‌ ಅವರಿಗೆ ಫೆರಾರಿ ತಂಡ ಶುಭ ಹಾರೈಸಿದೆ. ಜರ್ಮನಿಯ ಶುಮಾಕರ್‌ ಅವರು ಫಾರ್ಮುಲಾ ಒನ್‌ನಲ್ಲಿ ಏಳು ಬಾರಿ ವಿಶ್ವ ಚಾಂಪಿಯನ್‌ಪಟ್ಟ ಅಲಂಕರಿಸಿ ದಾಖಲೆ ಬರೆದಿದ್ದಾರೆ. ಐದು ವರ್ಷಗಳ ಹಿಂದೆ ಸ್ಕೀಯಿಂಗ್‌ ವೇಳೆ ನಡೆದ ಅವಘಡದಲ್ಲಿ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಅಂದಿನಿಂದಲೂ ಅವರು ಪ್ರಜ್ಞಾಹೀನ (ಕೋಮಾ) ಸ್ಥಿತಿಯಲ್ಲಿದ್ದಾರೆ. ‘ನಮ್ಮ ಚಾಂಪಿಯನ್‌ಗೆ ಇಂದು 50ನೇ ಹುಟ್ಟುಹಬ್ಬ. ನಾವು ನಿಮ್ಮೊಂದಿಗಿದ್ದೇವೆ ಮೈಕಲ್‌. ಜೀವನ್ಮರಣದ ನಡುವೆ ಹೋರಾಡುತ್ತಿರುವ ನಿಮಗೆ ಬೇಗನೆ ಜಯ ಸಿಗಲಿ’ ಎಂದು ಸ್ಕುಡೇರಿಯಾ ಫೆರಾರಿ ಟ್ವೀಟ್‌ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.