ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿ ಗೀತಾ ಬೆಂಗಳೂರು: ಹಾಲಿ ಚಾಂಪಿಯನ್‌ ಗೀತಾ ವಾಧ್ವ ಅವರು ದಿವಾಸ್ ಆನ್ ವ್ಹೀಲ್ಸ್‌, ಮಹಿಳೆಯರ ಕಾರು ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಭರವಸೆಯಲ್ಲಿದ್ದಾರೆ. ಬೆಂಗಳೂರು–ಕೊಡಗು ಚಿಕ್ಕಮ ಗಳೂರು ರ‍್ಯಾಲಿಗೆ ಗುರುವಾರ ಸಂಜೆ ಇಲ್ಲಿ ಚಾಲನೆ ನೀಡಲಾಯಿತು. 100 ಮಹಿಳೆಯರು ಸ್ಪರ್ಧೆಯಲ್ಲಿ ಪೈಪೋಟಿ ನಡೆಸುತ್ತಿದ್ದು ಎರಡು ದಿನ ಜಿದ್ದಾಜಿದ್ದಿಯ ಪೈಪೋಟಿ ನಡೆಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ ಸ್ಪರ್ಧೆ ಆರಂಭವಾಗಲಿದೆ. ಕಾಲ, ವೇಗ ಮತ್ತು ದೂರದ (ಟಿಎಸ್‌ಡಿ) ಆಧಾರದಲ್ಲಿ ನಡೆಯುವ ರ‍್ಯಾಲಿಯಲ್ಲಿ ಕಾರುಗಳು 750 ಕಿಮೀ ದೂರ ಕ್ರಮಿಸಲಿದ್ದು ಮೊದಲ ದಿನ ಬೆಂಗಳೂರಿನಿಂದ 350 ಕಿಮೀ ದೂರ ಸಾಗಿ ಚಿಕ್ಕಮಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ. ಅಲ್ಲಿ ರಾತ್ರಿ ತಂಗಿದ ನಂತರ ಮರುದಿನ ಬೆಳಿಗ್ಗೆ ಕೊಡಗಿನ ಕಡೆಗೆ ಸಾಗಲಿದ್ದಾರೆ. ಪುಲಿಬೆಟ್ಟದಲ್ಲಿ ಮುಕ್ತಾಯಗೊಳ್ಳಲಿದೆ. ಗೀತಾ ಅವರಿಗೆ ಕಳೆದ ಬಾರಿ ವಿಮೆನ್ಸ್ ಡ್ರೈವ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಶಿವಾನಿ ಪೃಥ್ವಿ, ರನ್ನರ್‌ ಅಪ್‌ ಆಶಿಮಾ ದುಗ್ಗಲ್‌ ಮತ್ತು ಅಮೃತಾ ಶೇರ್ಗಿಲ್ ಪೈಪೋಟಿ ಒಡ್ಡಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.