23ರಿಂದ ಅಂಧರ ಮ್ಯಾರಥಾನ್‌ ಬೆಂಗಳೂರು: ಸಮರ್ಥನಂ ಅಂಗವಿಕಲರ ಸಂಸ್ಥೆಯು ಇದೇ 23ರಿಂದ ಮೂರು ದಿನಗಳ ಕಾಲ ‘150 ಕಿ.ಮೀ ಅಂಧರ ಮ್ಯಾರಥಾನ್‌’ ಆಯೋಜಿಸಿದೆ. ಜ.23ರಂದು ಮೈಸೂರಿನ ಅರಮನೆ ಮುಂಭಾಗದಿಂದ ಆರಂಭವಾಗುವ ಈ ಮ್ಯಾರಥಾನ್‌ಗೆ ರಾಜವಂಶಸ್ಥೆ ಪ್ರಮೋದಾ ದೇವಿ ಮತ್ತು ಸಂಸದ ಪ್ರತಾಪ ಸಿಂಹ ಅವರು ಚಾಲನೆ ನೀಡಲಿದ್ದಾರೆ. ಮೈಸೂರು, ಮಂಡ್ಯ, ರಾಮನಗರ ಮೂಲಕ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಮ್ಯಾರಥಾನ್‌ ತಲುಪಲಿದೆ. ‘ಅಂಧರು ಎಲ್ಲ ರೀತಿಯಲ್ಲೂ ಸಮರ್ಥರು ಎಂಬುದನ್ನು ಸಾಬೀತುಪಡಿಸುವುದು ಇದರ ಉದ್ದೇಶ. ಮಾಲಾ ಕೋಲ್ಕರ್, ನಂದೀಶ್ ಜನಾರ್ದನ್, ಎನ್.ಡಿ.ಸುನಿತಾ, ರೇಣುಕಾರಜಪೂತ್, ಎನ್‌.ಕಾವ್ಯ, ಅಜಯ್ ಈರಣ್ಣ ಅವರು ಮ್ಯಾರಥಾನ್‌ನಲ್ಲಿ ಓಡಲಿದ್ದಾರೆ’ ಎಂದು ಸಂಸ್ಥೆಯ ಮುಖ್ಯಸ್ಥ ಮಹಾಂತೇಶ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.