ಹಳಿಯಾಳದಲ್ಲಿ ಇದೇ 26ರಿಂದ ರಾಷ್ಟ್ರೀಯ ಕುಸ್ತಿ ಹಳಿಯಾಳ:ಕರ್ನಾಟಕರಾಜ್ಯ ಕುಸ್ತಿ ಸಂಸ್ಥೆ ಮತ್ತುವಿ.ಆರ್.ದೇಶಪಾಂಡೆ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಜ. 26ರಿಂದ 28ರ ವರೆಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಮುಕ್ತ ಕುಸ್ತಿ ಸ್ಪರ್ಧೆ ಇಲ್ಲಿಜರುಗಲಿದೆ. ಮಹಾನ್‌ ಭಾರತ ಕೇಸರಿ, ಕರ್ನಾಟಕ ಕಂಠೀರವ, ಕರ್ನಾಟಕ ಕೇಸರಿ, ಕರ್ನಾಟಕ ಕುಮಾರ, ಕರ್ನಾಟಕ ಕಿಶೋರ, ಕರ್ನಾಟಕ ಚಾಂಪಿಯನ್ ಹಾಗೂ ಮಹಿಳೆಯರಿಗಾಗಿ ವೀರರಾಣಿ ಕಿತ್ತೂರ ಚನ್ನಮ್ಮ ಕೇಸರಿ, ಒನಕೆ ಒಬವ್ವ ಕರ್ನಾಟಕ ಕೇಸರಿ, ಕಿರಿಯರ ವಿಭಾಗ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆಗಳು ಜರುಗುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.