ಏಷ್ಯನ್‌ ಯೂತ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಎಂಟರ ಘಟ್ಟಕ್ಕೆ ಅಂಕಿತ್, ಅಮನ್ ಉಲಾನ್‌ಬಾತರ್‌, ಮಂಗೋಲಿಯಾ: ಭಾರತದ ಅಂಕಿತ್ ನರ್ವಾಲ್ ಮತ್ತು ಅಮನ್ ಅವರು ಮಂಗಳವಾರ ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಮಂಗಳವಾರ ಇಲ್ಲಿ ನಡೆದ 60 ಕೆ.ಜಿ. ವಿಭಾಗದ ಹಣಾಹಣಿಯಲ್ಲಿ ಅಂಕಿತ್‌ ಅವರು ಸ್ಥಳೀಯ ಬಾಕ್ಸರ್‌ ಟುಲ್ಗಾ ಓಯುನ್‌ಬಾತರ್‌ ಎದುರು 3–2ರಿಂದ ಗೆದ್ದರು. ಅಮನ್‌ 91 ಕೆ.ಜಿ. ಮೇಲಿನವರ ವಿಭಾಗದ ಬೌಟ್‌ನಲ್ಲಿ ಉಜ್ಬೆಕಿಸ್ತಾನದ ಮುಕ್‌ಮುದೊವ್‌ ಮಿಮುಕ್ಸಿನ್‌ ಎದುರು 5–0ಯಿಂದ ಜಯಿಸಿದರು.75 ಕೆಜಿ ವಿಭಾಗದ ಬೌಟ್‌ನಲ್ಲಿ ಭಾರತದ ಮೋಹಿತ್‌ ಅವರಿಗೆ ನಿರಾಸೆ ಕಾದಿತ್ತು. ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು ಕಜಕಸ್ತಾನದ ಬೆಕ್ತಾಸ್‌ ವಿರುದ್ಧ 2–3ರಿಂದ ಮಣಿದರು. ಮಹಿಳೆಯರ ವಿಭಾಗದಲ್ಲಿ ಕೋಮಲ್‌ಪ್ರೀತ್‌ ಕೌರ್‌ (+81 ಕೆಜಿ) ಹಾಗೂ ಸುಷ್ಮಾ (81 ಕೆಜಿ) ಸೆಮಿಫೈನಲ್‌ಗೆ ಕಾಲಿಟ್ಟಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.