ಟಿಟಿ: ಶರತ್‌ ದಾಖಲೆ ಅರ್ಚನಾಗೆ ಪ್ರಶಸ್ತಿ ಕಟಕ್‌: ಕಮಲೇಶ್ ಮೆಹ್ತಾ ಅವರ ಸದೀರ್ಘ ಕಾಲದ ದಾಖಲೆಯನ್ನು ಮುರಿದ ಅಚಂತಾ ಶರತ್ ಕಮಲ್, ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಒಂಬತ್ತನೇ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಪಿಎಸ್‌ಪಿಬಿಯನ್ನು ಪ್ರತಿನಿಧಿಸಿದ ಶರತ್‌ ಬುಧವಾರ ಇಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಅದೇ ಸಂಸ್ಥೆಯ ಸತ್ಯನ್ ಅವರನ್ನು 11-13, 11-5, 11-6, 5-11, 10-12, 11-6, 14-12ರಿಂದ ಮಣಿಸಿದರು. ಯುವ ಆಟಗಾರ್ತಿ ಅರ್ಚನಾ ಕಾಮತ್‌ ಮಹಿಳೆಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಪಿಎಸ್‌ಪಿಬಿಯನ್ನು ಪ್ರತಿನಿಧಿಸಿದ ಅವರು ಫೈನಲ್‌ ಪಂದ್ಯದಲ್ಲಿ ಪಶ್ಚಿಮ ಬಂಗಾಳದ ಕೃತ್ವಿಕಾ ಸಿನ್ಹಾ ರಾಯ್‌ ಎದುರು 12-10, 6-11, 11-9, 12-10, 7-11, 11-3ರಿಂದ ಗೆದ್ದರು. ಪುರುಷರ ವಿಭಾಗದ ಸೆಮಿಫೈನಲ್‌ನಲ್ಲಿ ಶರತ್‌, ಮಾನವ್ ಠಕ್ಕರ್ ಎದುರು ಮತ್ತು ಸತ್ಯನ್‌, ರೋನಿತ್ ಭಂಜಾ ಎದುರು ಗೆದ್ದಿದ್ದರು. ಮಹಿಳೆಯರ ವಿಭಾಗದಲ್ಲಿ ಅರ್ಚನಾ ಕಾಮತ್‌, ಮಣಿಕಾ ಭಾತ್ರಾ ಎದುರು ಮತ್ತು ಕೃತ್ವಿಕಾ ರಾಯ್‌, ಅಹಿಹಿಕಾ ಮುಖರ್ಜಿ ಎದುರು ಗೆದ್ದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.