ಚೆಸ್‌: ಜಂಟಿ ಅಗ್ರಸ್ಥಾನದಲ್ಲಿ ಆನಂದ್‌ ವಿಜ್ಕ್‌ ಆ್ಯನ್‌ ಜೀ, ನೆದರ್ಲೆಂಡ್ಸ್‌: ಐದು ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್, ಟಾಟಾ ಸ್ಟೀಲ್‌ ಚೆಸ್‌ ಟೂರ್ನಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಸೋಮವಾರ ನಡೆದ ಎಂಟನೇ ಸುತ್ತಿನ ಹೋರಾಟದಲ್ಲಿ ಭಾರತದ ಆನಂದ್‌, ಅಜರ್‌ಬೈಜಾನ್‌ನ ಶಖರಿಯಾರ್‌ ಮಮೆಡ್ಯರೋವ್‌ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 5.5ಕ್ಕೆ ಹೆಚ್ಚಿಸಿಕೊಂಡರು. ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಕೂಡಾ ಇಷ್ಟೇ ಪಾಯಿಂಟ್ಸ್‌ ಹೊಂದಿದ್ದಾರೆ. ಅವರು ಎಂಟನೇ ಸುತ್ತಿನ ಪೈಪೋಟಿಯಲ್ಲಿ ಹಂಗರಿಯ ರಿಚರ್ಡ್‌ ರ‍್ಯಾಪೋರ್ಟ್‌ ಅವರನ್ನು ಮಣಿಸಿದರು. ಭಾರತದ ವಿದಿತ್‌ ಸಂತೋಷ್‌ ಗುಜರಾತಿ ಮತ್ತು ನೆದರ್ಲೆಂಡ್ಸ್‌ನ ಅನಿಶ್‌ ಗಿರಿ ನಡುವಣ ಹೋರಾಟ ಡ್ರಾ ಆಯಿತು. ಇತರ ಪಂದ್ಯಗಳಲ್ಲಿ ಪೋಲೆಂಡ್‌ನ ಜಾನ್‌ ಕ್ರಿಜಿಸ್ಟೋಫ್‌, ರಷ್ಯಾದ ವ್ಲಾದಿಮಿರ್‌ ಕ್ರಾಮ್ನಿಕ್‌ ಎದುರೂ; ವ್ಲಾದಿಮಿರ್‌ ಫೆಡೊಸೀವ್‌, ಅಮೆರಿಕದ ಸ್ಯಾಮುಯೆಲ್‌ ಶಾಂಕಲ್ಯಾಂಡ್‌ ಮೇಲೂ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.