ಚಿತ್ರದುರ್ಗ: ಜ.27ಕ್ಕೆ ರಾಜ್ಯಮಟ್ಟದ ಓಟದ ಸ್ಪರ್ಧೆ ಚಿತ್ರದುರ್ಗ: ಇಲ್ಲಿನ ಸ್ಟೇಡಿಯಂ ಯೂತ್ಸ್ ಅಥ್ಲೆಟಿಕ್ ಅಕಾಡೆಮಿಯಿಂದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಇದೇ 27 ರಂದು ಬೆಳಿಗ್ಗೆ 6 ರಿಂದ ರಾಜ್ಯಮಟ್ಟದ ಓಟದ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೇಮಾನಂದ್ ಹೇಳಿದರು. ಅಂದು ನಗರ ವ್ಯಾಪ್ತಿಯಲ್ಲಿ 14 ವರ್ಷದೊಳಗಿನ ಬಾಲಕ-ಬಾಲಕಿಯರಿಗಾಗಿ 2 ಕಿ.ಮೀ. ಓಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು. ‘16 ರಿಂದ 30 ವರ್ಷದ ಪುರುಷರ ವಿಭಾಗಕ್ಕೆ 10 ಕಿಲೋ ಮೀಟರ್, ಮಹಿಳೆಯರ ವಿಭಾಗಕ್ಕೆ 5 ಕಿ.ಮೀ, 16 ವರ್ಷದೊಳಗಿನ ಬಾಲಕ-ಬಾಲಕಿಯರ ವಿಭಾಗಕ್ಕೆ 3 ಕಿ.ಮೀ, 30 ವರ್ಷ ಮೇಲ್ಪಟ್ಟ ಮಾಸ್ಟರ್ಸ್ ಪುರುಷ-ಮಹಿಳಾ ವಿಭಾಗಕ್ಕೆ 5 ಕಿ.ಮೀ. ಓಟದ ಸ್ಪರ್ಧೆ ಏರ್ಪಡಿಸಲಾಗಿದೆ’ ಎಂದರು. ‘ಓಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದವರಿಗೆ ಕ್ರಮವಾಗಿ ₹ 8 ಸಾವಿರ, ₹ 5 ಸಾವಿರ, ₹ 4 ಸಾವಿರ ನಗದು, ಪಾರಿತೋಷಕದ ಜತೆಗೆ ಪ್ರಶಸ್ತಿ ಪತ್ರ ನೀಡಲಾಗುವುದು. ನಾಲ್ಕು, ಐದು, ಆರನೇ ಸ್ಥಾನ ಪಡೆದವರಿಗೆ ನಗದು, ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುವುದು’ ಎಂದು ಹೇಳಿದರು. ‘ರಾಜ್ಯದ ಎಲ್ಲ ಜಿಲ್ಲೆಗಳ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಪ್ರವೇಶ ಶುಲ್ಕ ₹ 200 ನಿಗದಿ ಪಡಿಸಲಾಗಿದ್ದು, ನೋಂದಣಿಗೆ 26 ಕೊನೆ ದಿನವಾಗಿದೆ. ವಸತಿ, ಊಟ, ಉಪಹಾರ, ಗಾಯವಾದಲ್ಲಿ ಪ್ರಥಮ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು. ಹೆಚ್ಚಿನ ಮಾಹಿತಿಗೆ ಆಯೋಜಕರ ಮೊಬೈಲ್ ದೂರವಾಣಿ ಸಂಖ್ಯೆ 9945716168, 9886737787ಗೆ ಸಂಪರ್ಕಿಸಬಹುದು ಎಂದು ಮನವಿ ಮಾಡಿದ್ದಾರೆ. ಉಪಾಧ್ಯಕ್ಷ ಶಿವಕುಮಾರ್, ನಿರ್ದೇಶಕರಾದ ನಾಗಭೂಷಣ್, ಸಾಧಿಕ್ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.