ಸ್ಕೇಟಿಂಗ್‌: ಟ್ರಯೊ ವರ್ಲ್ಡ್‌ ಶಾಲೆ ವಿದ್ಯಾರ್ಥಿಗಳಿಗೆ ಚಾಂಪಿಯನ್‌ ಪಟ್ಟ ಬೆಂಗಳೂರು: ನಗರದ ಟ್ರಯೊ ವರ್ಲ್ಡ್‌ ಶಾಲೆ ತಂಡದವರು ಅಂತರ ಶಾಲಾ ಸ್ಕೇಟಿಂಗ್‌ ಟೂರ್ನಿಯ ಚಾಂಪಿಯನ್‌ ಪಟ್ಟ ಅಲಂಕರಿಸಿದರು. ನಗರದ ಪೂರ್ಣಪ್ರಜ್ಞಾ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿಇತ್ತೀಚೆಗೆ ನಡೆದ ಟೂರ್ನಿಯ 150, 200, 300, 400 ಮತ್ತು 500 ಮೀಟರ್ಸ್ ವಿಭಾಗದಲ್ಲಿ ಟ್ರಯೊ ವರ್ಲ್ಡ್‌ ಶಾಲೆಯ ವಿದ್ಯಾರ್ಥಿಗಳು ಒಟ್ಟು21 ಪದಕಗಳನ್ನು ಗೆದ್ದರು. ಟೂರ್ನಿಯಲ್ಲಿ ಕಡಿಮೆ ಅವಧಿಯಲ್ಲಿ ಗುರಿ ತಲುಪಿದ (1 ನಿಮಿಷ 3 ಸೆಕೆಂಡು) 5ನೇ ತರಗತಿಯ ಎ.ಅಶೋಕ್‌ ಹೆಗ್ಡೆ ಬೆಸ್ಟ್‌ ಸ್ಕೇಟರ್‌ ಎನಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.