ಅಖಿಲ ಭಾರತ ಅಂಚೆ ಅಥ್ಲೆಟಿಕ್ಸ್ ಇಂದಿನಿಂದ ಮೈಸೂರು: ಕರ್ನಾಟಕ ಅಂಚೆ ವೃತ್ತದ ಆಶ್ರಯದಲ್ಲಿ ನ.14 ರಿಂದ 16ರ ವರೆಗೆ ಮೈಸೂರಿನಲ್ಲಿ 34ನೇ ಅಖಿಲ ಭಾರತ ಅಂಚೆ ಅಥ್ಲೆಟಿಕ್ಸ್‌ ಮತ್ತು ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ಆಯೋಜಿಸಲಾಗಿದೆ. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿರುವ ಅಥ್ಲೆಟಿಕ್ಸ್ ಕೂಟದಲ್ಲಿ ದೇಶದ 15 ಅಂಚೆ ವೃತ್ತಗಳ ಸುಮಾರು 220 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ. ಚಾರ್ಲ್ಸ್‌ ಲೋಬೊ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.