ಪ್ಯಾರಾ ಈಜು ಸ್ಪರ್ಧೆಗೆ ತಡೆ ಪ್ಯಾರಿಸ್‌: ಇಸ್ರೇಲ್‌ ಅಥ್ಲೆಟ್‌ಗಳು ಪಾಲ್ಗೊಳ್ಳುವ ಸಾಧ್ಯತೆಗಳು ಇಲ್ಲದ ಕಾರಣ, 2019ರಲ್ಲಿ ಮಲೇಷ್ಯಾದಲ್ಲಿ ನಡೆಯಬೇಕಿದ್ದ ವಿಶ್ವ ಪ್ಯಾರಾ ಈಜು ಚಾಂಪಿಯನ್‌ಷಿಪ್‌ ಅನ್ನು ತಡೆಹಿಡಿಯಲಾಗಿದೆ. ಈ ವಿಷಯವನ್ನು ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್‌ ಸಮಿತಿ (ಐಪಿಸಿ) ಭಾನುವಾರ ಖಚಿತಪಡಿಸಿದೆ. ‘ಇಸ್ರೇಲ್‌ನ ಈಜುಪಟುಗಳು ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಬಗ್ಗೆ ಮಲೇಷ್ಯಾ ಗೃಹ ಸಚಿವಾಲಯ ಖಾತ್ರಿಪಡಿಸಲಿಲ್ಲ. ಅವರು ತಾರತಮ್ಯ ಮುಕ್ತವಾಗಿ ಇರುವ ಸಾಧ್ಯತೆಯ ಬಗ್ಗೆಯೂ ಸಚಿವಾಲಯ ಸಮರ್ಪಕ ಮಾಹಿತಿ ನೀಡಲಿಲ್ಲ. ಭದ್ರತೆಯ ಬಗ್ಗೆಯೂ ಸಂದೇಹ ಇದೆ’ ಎಂದು ಐಪಿಸಿಯು ತಿಳಿಸಿದೆ. ಐಪಿಸಿ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಇಸ್ರೇಲ್‌ ವಿದೇಶಾಂಗ ಸಚಿವ ಇಮ್ಯಾನುಯೆಲ್ ನಹ್ಸಾನ್‌ ‘ಇದು, ಮೌಲ್ಯಗಳಿಗೆ ಲಭಿಸಿದ ಜಯವಾಗಿದೆ. ಈ ಮೂಲಕ ಸ್ವಾತಂತ್ರ್ಯ ಮತ್ತು ಸಮಾನತೆಗೆ ಬೆಲೆ ಸಿಕ್ಕಿದೆ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.