ಚೇತನ್‌ ಚಾಂಪಿಯನ್‌ ಬೆಂಗಳೂರು: ಚಾಂಪಿಯನ್ಸ್ ಯಾಚ್ ಕ್ಲಬ್ ಎಫ್ಎಂಎಸಿಐ ರಾಷ್ಟ್ರೀಯ ರ‍್ಯಾಲಿಯಲ್ಲಿ ಎಂಆರ್‌ಎಫ್‌ನ ಚೇತನ್ ಶಿವರಾಮ್ಅವರು ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.ಡಾ. ಬಿಕ್ಕು ಬಾಬು ಎರಡನೇ ಸ್ಥಾನ ಗಳಿಸಿದರು. ರೆಡ್ ತಂಡದ ಈ ಇಬ್ಬರು ಸವಾರರಿಗೆ ಇತರರು ದಿಟ್ಟ ಹೋರಾಟ ನೀಡುವಲ್ಲಿ ವಿಫಲರಾದರು. ನಾಲ್ಕು ಹಾಗೂ ಐದನೇ ಸ್ಥಾನದೊಂದಿಗೆ ಹೋರಾಟ ಆರಂಭಿಸಿದ ಚೇತನ್ ಹಾಗೂ ಡಾ. ಬಿಕ್ಕು, ಕೊನೆಯ ತನಕವೂ ಸ್ಥಿರ ಪ್ರದರ್ಶನ ಕಾಯ್ದುಕೊಂಡು ಮುನ್ನುಗ್ಗಿದರು. ಹಾಲಿ ಚಾಂಪಿಯನ್ ಗೌರವ್ ಗಿಲ್ ದಿನದ ಆರಂಭದಲ್ಲೇ ಸ್ಪರ್ಧೆಯಿಂದ ಹಿಂದೆ ಸರಿದರು. ಎರಡನೇ ದಿನದಲ್ಲಿ ಅವರ ಕಾರು ಚಾಲನೆಗೊಳ್ಳಲೇ ಇಲ್ಲ. ಜೆಕೆ ಟೈರ್ ಮೊಟೊಸ್ಪೋರ್ಟ್ಸ್ ತಂಡ ನಿರಾಸೆಯೊಂದಿಗೆ ಮರಳಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.