ರಾಷ್ಟ್ರೀಯ ಸೈಕ್ಲಿಂಗ್ ಕರ್ನಾಟಕದ ಸಾಧನೆ ಜೈಪುರ: ಕರ್ನಾಟಕದ ಸೈಕ್ಲಿಂಗ್ ತಂಡವು ಇಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 16 ಪದಕಗಳನ್ನು ಗೆದ್ದ ಸಾಧನೆ ಮಾಡಿತು. ರಾಜದ್ಯ ಸೈಕ್ಲಿಸ್ಟ್‌ಗಳು ಎರಡು ಚಿನ್ನ, ಆರು ಬೆಳ್ಳಿ ಮತ್ತು ಎಂಟು ಕಂಚಿನ ಪದಕಗಳು ಅದರಲ್ಲಿ ಸೇರಿವೆ. ಹೋದ ವರ್ಷ 11 ಪದಕಗಳನ್ನು ಗೆದ್ದಿತ್ತು. ಕೊನೆಯ ದಿನ ನಡೆದ 18 ವರ್ಷದ ಬಾಲಕಿಯರ ವಿಭಾಗದ ನಾಲ್ಕು ಕಿಲೋಮೀಟರ್ಸ್‌ ಟೀಮ್ ಪರ್ಸ್ಯೂಟ್‌ನಲ್ಲಿ ಚಿನ್ನದ ಪದಕ ಗೆದ್ದರು. ಪುರುಷರ 30 ಕಿ.ಮೀ ಪಾಯಿಂಟ್‌ ರೇಸ್‌ನಲ್ಲಿ 37 ಪಾಯಿಂಟ್ಸ್‌ ಗಳಿಸಿದ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯ ವೆಂಕಪ್ಪ ಕೆಂಗಲಗುತ್ತಿ ಬೆಳ್ಳಿ ಪದಕ ಗೆದ್ದರು. ಅವರು ಈಬಾರಿ ಒಟ್ಟು ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.