ಹೊಸ ಕ್ರೀಡಾ ವಸತಿ ನಿಲಯಗಳ ಘೋಷಣೆ ಬೆಂಗಳೂರು: ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ನೀಡಿರುವ ಅನುದಾನದ ವಿವರ. * ₹ 12.5 ಕೋಟಿ ವೆಚ್ಚದಲ್ಲಿ ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್ ಹಾಗೂ ಮಡಿಕೇರಿಯಲ್ಲಿ ಹೊಸ ಕ್ರೀಡಾ ವಸತಿ ನಿಲಯಗಳ ನಿರ್ಮಾಣ. * ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಕಲಬುರ್ಗಿ, ಕೋಲಾರ, ಹಾಸನ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಬಾಲಕಿಯರ ಪ್ರತ್ಯೇಕ ಕ್ರೀಡಾ ವಸತಿ ನಿಲಯಗಳ ಸ್ಥಾಪನೆ. * ಮಂಡ್ಯ, ಬೀದರ್, ತುಮಕೂರು ಹಾಗೂ ಹಾಸನ ಜಿಲ್ಲೆಯ ಕ್ರೀಡಾಂಗಣಗಳ ಮೇಲ್ದರ್ಜೆಗೆ ₹ 4 ಕೋಟಿ. * ₹ 2 ಕೋಟಿ ವೆಚ್ಚದಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಮೂಲಕ 10 ಸ್ಥಳಗಳಲ್ಲಿ ಸಾಹಸ ಕ್ರೀಡೋತ್ಸವ ಆಯೋಜನೆ. * 13 ರಿಂದ 15ರ ವಯೋಮಾನದ ಮಕ್ಕಳಿಗಾಗಿ ‘ಮಿನಿ ಒಲಿಂಪಿಕ್ ಗೇಮ್ಸ್‌–2019’ ಆಯೋಜನೆ. * ವಿರಾಜಪೇಟೆಯ ಬಾಳುಗೋಡದಲ್ಲಿರುವ ಕೊಡವ ಸಮಾಜದ ಹಾಕಿ ಕ್ರೀಡಾಂಗಣದ ಅಭಿವೃದ್ಧಿಗೆ ₹ 5 ಕೋಟಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.