ವಾಲಿಬಾಲ್‌: ಕ್ಯಾಲಿಕಟ್‌ಗೆ ಜಯ ಕೊಚ್ಚಿ: ಐದು ಸೆಟ್‌ಗಳಲ್ಲೂ ಪ್ರಾಬಲ್ಯ ಮೆರೆದ ಕ್ಯಾಲಿಕಟ್‌ ಹೀರೋಸ್‌ ತಂಡ ಪ್ರೊ ವಾಲಿಬಾಲ್‌ ಲೀಗ್‌ನ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ. ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ಕ್ಯಾಲಿಕಟ್‌ 15–11, 15–9, 15–14, 15–13, 15–10ರಿಂದ ಕೊಚ್ಚಿ ಬ್ಲೂ ಸ್ಪೈಕರ್ಸ್‌ ತಂಡವನ್ನು ಮಣಿಸಿತು. ಕ್ಯಾಲಿಕಟ್‌ ತಂಡದ ಜೆರೋಮ್‌ ವಿನೀತ್‌ ಒಟ್ಟು 16 ಪಾಯಿಂಟ್ಸ್‌ ಗಳಿಸಿ ಮಿಂಚಿದರು. ಕರ್ನಾಟಕದ ಎ.ಕಾರ್ತಿಕ್‌ 13 ಪಾಯಿಂಟ್ಸ್‌ ಹೆಕ್ಕಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.