ರಾಷ್ಟ್ರೀಯ ಹಾಕಿ: ಆರ್‌ಎಸ್‌ಪಿಬಿ ತಂಡಕ್ಕೆ ಗೆಲುವು ಹಿಸ್ಸಾರ್‌, ಹರಿಯಾಣ: ರೈಲ್ವೇಸ್‌ ಸ್ಪೋರ್ಟ್ಸ್ ಪ್ರಮೋಷನ್‌ ಬೋರ್ಡ್‌ (ಆರ್‌ಎಸ್‌ಪಿಬಿ) ತಂಡವು ಇಲ್ಲಿ ನಡೆಯುತ್ತಿರುವ ಸೀನಿಯರ್‌ ಮಹಿಳೆಯರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ಎರಡನೇ ಪಂದ್ಯದಲ್ಲಿ ಜಯಿಸಿತು. ಶನಿವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆರ್‌ಎಸ್‌ಪಿಬಿ 8–0 ಗೋಲುಗಳಿಂದ ಒಡಿಶಾ ತಂಡವನ್ನು ಮಣಿಸಿತು. ‘ಎ’ ವಿಭಾಗದಲ್ಲಿ ರಾಜಸ್ಥಾನ ತಂಡವು 5–1 ರಿಂದ ಕೂರ್ಗ್‌ ತಂಡವನ್ನು ಸೋಲಿಸಿತು. ‘ಬಿ’ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶವು 3–0 ಯಿಂದ ಗಂಗಾಪುರ–ಒಡಿಶಾ ತಂಡವನ್ನುಮಣಿಸಿತು. ‘ಡಿ’ ಗುಂಪಿನಲ್ಲಿ ಜಾರ್ಖಂಡ್‌ ತಂಡವು 7–0 ಯಿಂದ ತಮಿಳುನಾಡು ತಂಡವನ್ನು ಸೋಲಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.