ಹಾಕಿ: ಸೆಮಿಗೆ ಕೆನರಾ ಬ್ಯಾಂಕ್‌ ಬೆಂಗಳೂರು: ಕೆನರಾ ಬ್ಯಾಂಕ್‌ ತಂಡದವರು ಹಾಕಿ ಕರ್ನಾಟಕ ಆಶ್ರಯದ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಶಾಂತಿನಗರದಲ್ಲಿರುವ ಕಾರ್ಯಪ್ಪ ಹಾಕಿ ಅರೆನಾದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕೆನರಾ ಬ್ಯಾಂಕ್‌ 2–1 ಗೋಲುಗಳಿಂದ ಎಂಇಜಿ ತಂಡವನ್ನು ಪರಾಭವಗೊಳಿಸಿತು. ಕೆನರಾ ಬ್ಯಾಂಕ್‌ ತಂಡದ ರೊನಾಲ್ಡ್‌ ಕಿರಣ್‌ ಮತ್ತು ಪೃಥ್ವಿ ರಾಜ್‌ ಕ್ರಮವಾಗಿ 19 ಮತ್ತು 25ನೇ ನಿಮಿಷಗಳಲ್ಲಿ ಗೋಲು ಹೊಡೆದರು. ಎಂಇಜಿ ತಂಡದ ಸುನೀಲ್‌ 14ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಸೆಮಿಫೈನಲ್‌ನಲ್ಲಿ ಕೆನರಾ ಬ್ಯಾಂಕ್‌ ತಂಡ ಕೊಡವ ಸಮಾಜ ಎದುರು ಸೆಣಸಲಿದೆ. ಕೊಡವ ಸಮಾಜ ಮತ್ತು ಕಸ್ಟಮ್ಸ್‌ ಆ್ಯಂಡ್‌ ಎಕ್ಸೈಸ್‌ ನಡುವಣ ಇನ್ನೊಂದು ಪಂದ್ಯ 1–1 ಗೋಲುಗಳಿಂದ ಸಮಬಲವಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.