ಕರ್ನಾಟಕಕ್ಕೆ ಜಯ ಬೆಂಗಳೂರು: ಕರ್ನಾಟಕದ ಪುರುಷರ ತಂಡದವರು ರಾಷ್ಟ್ರೀಯ ಸೀನಿಯರ್‌ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದ್ದಾರೆ. ಜೆ.ಪಿ.ನಗರದ ಏಳನೇ ಹಂತದಲ್ಲಿರುವ ಆರ್‌.ಬಿ.ಐ ಬಡಾವಣೆಯ ಮೈದಾನದಲ್ಲಿ ಶುಕ್ರವಾರ ನಡೆದ ಹೋರಾಟದಲ್ಲಿ ರಾಜ್ಯ ತಂಡ 35–31, 35–15ರಲ್ಲಿ ತೆಲಂಗಾಣವನ್ನು ಸೋಲಿಸಿತು. ಇತರ ಪಂದ್ಯಗಳಲ್ಲಿ ಕೆನರಾ ಬ್ಯಾಂಕ್‌ 35–28, 33–35, 35–20ರಲ್ಲಿ ಮೇಜರ್‌ ಪೋರ್ಟ್ಸ್‌ ಎದುರೂ, ಜಿಂದಾಲ್‌ ಸ್ಟೀಲ್‌ 35–30, 35–19ರಲ್ಲಿ ಇಸ್ರೊ ಮೇಲೂ, ಇಂಡಿಯನ್‌ ರೈಲ್ವೆ 35–19, 35–13ರಲ್ಲಿ ಮಹಾರಾಷ್ಟ್ರ ವಿರುದ್ಧವೂ, ತಮಿಳುನಾಡು 35–13, 35–26ರಲ್ಲಿ ಕೇರಳ ಎದುರೂ, ಪುದುಚೇರಿ 35–17, 35–12ರಲ್ಲಿ ಜಾರ್ಖಂಡ್‌ ಮೇಲೂ, ಆಂಧ್ರ ಪ್ರದೇಶ 35–30, 35–21ರಲ್ಲಿ ಪಶ್ಚಿಮ ಬಂಗಾಳ ವಿರುದ್ಧವೂ ವಿಜಯಿಯಾದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.