ಚೆಸ್‌: ಅಭಿಜೀತ್‌ಗೆ ಪ್ರಶಸ್ತಿ ಕ್ಯಾನೆಸ್‌: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಅಭಿಜೀತ್ ಗುಪ್ತಾ, ಕ್ಯಾನೆಸ್‌ ಇಂಟರ್‌ನ್ಯಾಷನಲ್‌ ಓಪನ್‌ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಸೋಮವಾರ ನಡೆದ ಅಂತಿಮ ಸುತ್ತಿನ ಹಣಾಹಣಿಯಲ್ಲಿ ಅಭಿಜೀತ್‌, ಇಟಲಿಯ ಪಿಯೆರ್‌ ಲುಯಿಗಿ ಬಾಸೊ ಎದುರು ಡ್ರಾ ಮಾಡಿಕೊಂಡರು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 7.5ಕ್ಕೆ ಹೆಚ್ಚಿಸಿಕೊಂಡು ಟ್ರೋಫಿಗೆ ಮುತ್ತಿಕ್ಕಿದರು. ಭಾರತದ ಆಟಗಾರ, ಬೆಲಾರಸ್‌ನ ನಿಕಿತಾ ಮಯಿರೋವ್‌, ಪೋಲೆಂಡ್‌ನ ನಸುತಾ ಗ್ರೆಗೋರ್ಜ್‌ ಮತ್ತು ಉಕ್ರೇನ್‌ನ ಯೂರಿ ಸೊಲೊಡೊವ್ನಿಚೆಕೊ ಅವರನ್ನು ಹಿಂದಿಕ್ಕಿದರು. ಟೂರ್ನಿಯ ಮೊದಲ ಆರು ಸುತ್ತುಗಳಲ್ಲಿ ಗೆದ್ದ ಅಭಿಜೀತ್‌, ನಂತರ ಸತತ ಮೂರು ಸುತ್ತುಗಳಲ್ಲಿ ಡ್ರಾ ಮಾಡಿಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.