ಬ್ಯಾಡ್ಮಿಂಟನ್‌: ಪ್ರಶಸ್ತಿ ಮೇಲೆ ಅಜಯ್‌ ಕಣ್ಣು ಮುಯೆಲ್‌ಹೀಮ್‌ ಆ್ಯನ್‌ ಡರ್‌ ರುಹ್ರ್‌, ಜರ್ಮನಿ: ಭಾರತದ ಅಜಯ್‌ ಜಯರಾಮ್‌ ಮತ್ತು ಶುಭಂಕರ್‌ ಡೇ ಅವರು ಜರ್ಮನಿ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಮಂಗಳವಾರದಿಂದ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಜಯರಾಮ್‌ ಅವರು ಮೊದಲ ಸುತ್ತಿನಲ್ಲಿ ಜಪಾನ್‌ನ ಕಂಟಾ ಸುನೆಯಾಮ ಎದುರು ಸೆಣಸಲಿದ್ದಾರೆ. ಶುಭಂಕರ್‌ಗೆ ಆರಂಭಿಕ ಸುತ್ತಿನಲ್ಲಿ ಥಾಯ್ಲೆಂಡ್‌ನ ಕಾಂಟಪನ್‌ ವಾಂಗ್‌ಚರೊಯೆನ್‌ ಸವಾಲು ಎದುರಾಗಲಿದೆ. ಮಹಿಳಾ ಡಬಲ್ಸ್‌ನಲ್ಲಿ ಕಣದಲ್ಲಿರುವ ಮೇಘನಾ ಜಕ್ಕಂಪುಡಿ ಮತ್ತು ಪೂರ್ವಿಶಾ ಎಸ್‌.ರಾಮ್‌, ಆರಂಭಿಕ ಸುತ್ತಿನಲ್ಲಿ ಮಲೇಷ್ಯಾದ ಚೋವ್‌ ಮೀ ಕುವಾನ್ ಮತ್ತು ಲೀ ಮೆಂಗ್‌ ಯೀನ್‌ ಎದುರು ಹೋರಾಡಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.