ಏಷ್ಯನ್ ಮಾಸ್ಟರ್ಸ್‌ ಕೂಟಕ್ಕೆ ಯೋಗೇಂದ್ರ ಬೆಂಗಳೂರು: ಕೇಂದ್ರ ಸರ್ಕಾರದ ಸಿಎಸ್‌ಇಜೆಡ್ ಅಧಿಕಾರಿ ಎಂ. ಯೋಗೇಂದ್ರ ಅವರು ಮಲೇಷ್ಯಾದಲ್ಲಿ ಡಿಸೆಂಬರ್ 2 ರಿಂದ ನಡೆಯಲಿರುವ ಏಷ್ಯನ್ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಅವರು 55 ವರ್ಷ ಮೇಲಿನವರ ಮೂರು ಸಾವಿರ ಮೀಟರ್ಸ್‌ ಸ್ಟೀಪಲ್ ಚೇಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಈಚೆಗೆ ಮಂಗಳೂರಿನಲ್ಲಿ ನಡೆದಿದ್ದ ರಾಜ್ಯ ಮಾಸ್ಟರ್ಸ್‌ ಕೂಟದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು. ಮೂಲತಃ ಮೈಸೂರಿನವರಾದ ಯೋಗೇಂದ್ರ, ಬೆಳ್ಳಂದೂರಿನಲ್ಲಿರುವ ಕೊಚಿನ್ ವಿಶೇಷ ಆರ್ಥಿಕ ವಲಯದ ಕಚೇರಿಯಲ್ಲಿ ( ಸಿಎಸ್‌ಇಜೆಡ್)ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಇಲಾಖೆಯ ಜಂಟಿ ಅಭಿವೃದ್ಧಿ ಆಯುಕ್ತ ಎ.ಎಸ್. ನವೀನ್ ಕುಶಾಲಪ್ಪ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.