ವಿಶ್ವ ಮಲ್ಲಕಂಬ: ಭಾರತಕ್ಕೆ ಪ್ರಶಸ್ತಿ ಮುಂಬೈ: ಭಾರತ ಮಲ್ಲಕಂಬ ತಂಡವು ಭಾನುವಾರ ಇಲ್ಲಿ ನಡೆದ ಮೊದಲ ವಿಶ್ವ ಮಲ್ಲಕಂಬ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿತು. ಈ ಚಾಂಪಿಯನ್‌ಷಿಪ್‌ ನಲ್ಲಿ ಭಾರತ ತಂಡವು 244.73 ಪಾಯಿಂಟ್ಸ್‌ ಗಳಿಸಿ ಮೊದಲ ಸ್ಥಾನ ಪಡೆಯಿತು. ಸಿಂಗಪುರ (44.45) ಮತ್ತು ಮಲೇಷ್ಯಾ (30.22) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು. ಸೆಂಟ್ರಲ್‌ ಮುಂಬೈನ್ ಶಿವಾಜಿ ಪಾರ್ಕ್‌ನಲ್ಲಿ ನಡೆದ ಟೂರ್ನಿಯಲ್ಲಿ ಸ್ಪೇನ್, ಜರ್ಮನಿ, ಜೆಕ್ ಗಣರಾಜ್ಯ, ಇಟಲಿ, ಅಮೆರಿಕ, ಇರಾನ್, ನಾರ್ವೆ, ಇಂಗ್ಲೆಂಡ್, ಫ್ರಾನ್ಸ್‌, ಮಲೇಷ್ಯಾ, ಸಿಂಗಪುರ, ಜಪಾನ್, ವಿಯಟ್ನಾಮ್, ಬಹರೇನ್ ಮತ್ತು ಭಾರತ ತಂಡಗಳು ಸ್ಪರ್ಧಿಸಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.