ರಾಜ್ಯ ತಂಡಕ್ಕೆ ತೇಜಸ್‌, ಜಯಲಕ್ಷ್ಮಿ ಸಾರಥ್ಯ ಬೆಂಗಳೂರು: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಜಯಲಕ್ಷ್ಮಿ ಮತ್ತು ವಿಜಯನಗರ ಸ್ಪೋರ್ಟ್ಸ್‌ ಕ್ಲಬ್‌ನ ತೇಜಸ್‌ ಅವರು ಮಂಗಳವಾರದಿಂದ ಜೆ.ಪಿ.ನಗರದಲ್ಲಿ ನಡೆಯುವ ರಾಷ್ಟ್ರೀಯ ಸೀನಿಯರ್‌ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾಟಕದ ಮಹಿಳಾ ಮತ್ತು ಪುರುಷರ ತಂಡಗಳನ್ನು ಮುನ್ನಡೆಸಲಿದ್ದಾರೆ. ತಂಡಗಳು ಇಂತಿವೆ: ಪುರುಷರು: ತೇಜಸ್‌ (ನಾಯಕ), ಕಿರಣ್‌ ಕುಮಾರ್‌, ಗೋಪಾಲ್‌, ವಾರಿದಿ, ಉಲ್ಲಾಸ್‌, ಮಹದೇವಸ್ವಾಮಿ, ನಟರಾಜ್‌, ಮನೀಷ್‌, ತಿಲಕ್‌ ಕುಮಾರ್‌ ಮತ್ತು ಹರೀಶ್‌. ಕೋಚ್‌: ಧ್ರುವ, ಮ್ಯಾನೇಜರ್‌: ಆರ್‌.ಸುಂದರ್‌ ರಾಜು. ಮಹಿಳೆಯರು: ಜಯಲಕ್ಷ್ಮಿ (ನಾಯಕಿ), ಲಾವಣ್ಯ, ಮೇಘನಾ, ಪಲ್ಲವಿ, ಲತಾ, ಕವನ, ಚಂದನ, ರೇಖಾ, ಮೇಘನಾ ಮತ್ತು ಲಕ್ಷ್ಮಿ. ಮ್ಯಾನೇಜರ್‌: ವೀಣಾ ರಮೇಶ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.