ಐಜಿಐ ಮೈದಾನದಲ್ಲಿ ಬ್ಯಾಡ್ಮಿಂಟನ್‌ ಟೂರ್ನಿ ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ (ಐಜಿಐ) ಮಾರ್ಚ್‌ 26ರಿಂದ 31ರವರೆಗೆ ವಿಶ್ವ ಟೂರ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿ ನಡೆಯಲಿದೆ. ಈ ಟೂರ್ನಿಯು ಹಿಂದಿನ ಏಳು ವರ್ಷಗಳ ಕಾಲ ಸಿರಿ ಫೋರ್ಟ್‌ ಸ್ಪೋರ್ಟ್ಸ್‌ ಕ್ರೀಡಾ ಸಂಕೀರ್ಣದಲ್ಲಿ ಜರುಗಿತ್ತು. ಐಜಿಐ ಮೈದಾನದಲ್ಲಿ 1982ರ ಏಷ್ಯನ್‌ ಕ್ರೀಡಾಕೂಟ ಜರುಗಿತ್ತು. ಇತ್ತೀಚೆಗೆ ನಡೆದಿದ್ದ ಎಐಬಿಎ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ಗೂ ಈ ಕ್ರೀಡಾಂಗಣ ವೇದಿಕೆ ಕಲ್ಪಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.