ಡಚ್‌ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿ: ಪ್ರೀ ಕ್ವಾರ್ಟರ್ ಫೈನಲ್‌ಗೆ ಸಾಯಿ ಚರಣ್‌ ನವದೆಹಲಿ: ಭಾರತದ ಸಾಯಿ ಚರಣ್ ಕೋಯ ಅಮೋಘ ಆಟವಾಡಿ ಡಚ್ ಜೂನಿಯರ್ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಶನಿವಾರ ನಡೆದ ಪಂದ್ಯದಲ್ಲಿ ಅವರು ಇಂಡೊನೇಷ್ಯಾದ ಸೈಬದಾ ಪೆರ್ಕಾಸ ಬೆಲ್ವ ಅವರನ್ನು 21–11, 21–19ರಿಂದ ಮಣಿಸಿದರು. ಹಣಾಹಣಿ 38 ನಿಮಿಷ ನಡೆಯಿತು. ಮಹಿಳೆಯರ ವಿಭಾಗದಲ್ಲಿ ಮಣಿಪುರದ ಮೀರಾಬಾಯಿ 21–13, 21–16ರಿಂದ ಒಂಬತ್ತನೇ ಶ್ರೇಯಾಂಕದ ಎರ್ನಸ್ಟೊ ಬಾಷ್‌ ವಿಚ್‌ ಅವರನ್ನು ಮಣಿಸಿದರು. ಸಮಿಯಾ ಐಮದ್ ಫಾರೂಕಿ ಸೋತು ಹೊರಬಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.