ಜೆರುಸಲೆಮ್‌ಗೆ ಬೆಂಗಳೂರಿನ ಅಶ್ವಿನಿ ಬೆಂಗಳೂರು: ಬೆಂಗಳೂರಿನ ಅಶ್ವಿನಿ ಅವರು ಇದೇ 15ರಂದು ಇಸ್ರೇಲ್‌ನ ಜೆರುಸಲೆಂನಲ್ಲಿ ನಡೆಯಲಿರುವ ಮ್ಯಾರಥಾನ್‌ನಲ್ಲಿ ಭಾಗವಹಿಸುವರು. ‘ಎಚ್‌ಐವಿ ಇರುವ ಅಥ್ಲೀಟ್ ಅಶ್ವಿನಿಯವರು ಬೆಂಗಳೂರು ನಗರವನ್ನು ಜೆರುಸಲೆಂನಲ್ಲಿ ಪ್ರತಿನಿಧಿಸುತ್ತಿದ್ದಾರೆ. ಜೀವನದಲ್ಲಿ ಎದುರಾದ ಸಂಕಷ್ಟ ಮತ್ತು ಸವಾಲುಗಳನ್ನು ದಿಟ್ಟತನದಿಂದ ಎದುರಿಸುತ್ತಿರುವ ಅಶ್ವಿನಿ ಅವರು ನಮ್ಮ ಸಂಸ್ಥೆಯ ‘ಚಾಂಪಿಯನ್ ಇನ್‌ ಮೀ’ ಯೋಜನೆಯಲ್ಲಿ ಗುರುತಿಸಲ್ಪಟ್ಟಿದ್ದಾರೆ. ಅವರು ಇಸ್ರೇಲ್‌ಗೆ ತೆರಳಲಿದ್ದಾರೆ’ ಎಂದು ಬೆಂಗಳೂರು ಸ್ಕೂಲ್ಸ್‌ ಸ್ಪೋರ್ಟ್ಸ್‌ ಫೌಂಡೇಷನ್ ಅಧಿಕಾರಿ ಎಲ್ವಿಸ್ ಜೋಸೆಫ್ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.