ಬಾಕ್ಸಿಂಗ್: ಚಿನ್ನ ಗೆದ್ದ ಕವಿಂದರ್‌ ನವದೆಹಲಿ: ಭಾರತದ ಕವಿಂದರ್ ಸಿಂಗ್ ಬಿಶ್ಠ್‌ ಅವರು ಫಿನ್ಲೆಂಡ್‌ನ ಹೆಲ್ಸಿಂಕಿಯಲ್ಲಿ ನಡೆದ ಜೀಬೀ ಬಾಕ್ಸಿಂಗ್ ಟೂರ್ನಿಯ 56 ಕೆಜಿ ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಶಿವ ಥಾಪಾ (60 ಕೆಜಿ) ಮತ್ತು ಗೋವಿಂದ ಸಹಾನಿ (49 ಕೆಜಿ), ಮೊಹಮ್ಮದ್‌ ಹಸಮುದ್ದೀನ್‌ (56 ಕೆಜಿ) ಮತ್ತು ದಿನೇಶ್ ಡಾಗರ್‌ (69 ಕೆಜಿ) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಕವಿಂದರ್‌ಗೆ ಫೈನಲ್‌ನಲ್ಲಿ ಎದುರಾಳಿಯಾಗಿದ್ದವರು ಹಸಮುದ್ದೀನ್‌. ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್‌ ಬೋರ್ಡ್‌ನ ಇಬ್ಬರೂ ಬಾಕ್ಸರ್‌ಗಳು ಬಲಶಾಲಿ ಪಂಚ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕೊನೆಗೆ ಕವಿಂದರ್‌ ಗೆಲುವು ಸಾಧಿಸಿದರು. ಭಾರತದ ಸುಮಿತ್ ಸಾಂಗ್ವಾನ್‌ (91 ಕೆಜಿ), ಸಚಿನ್ ಸಿವಾಚ್‌ (52 ಕೆಜಿ) ಮತ್ತು ನವೀನ್ ಕುಮಾರ್ (91+) ಕಂಚಿನ ಪದಕ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.