ಭಾರತ ತಂಡಕ್ಕೆ ಆಯ್ಕೆಯಾದ ಉಜ್ವಲ್‌ ನವದೆಹಲಿ: ಕರ್ನಾಟಕದ ಜಿಮ್ನಾಸ್ಟಿಕ್‌ ಪಟು ಉಜ್ವಲ್‌ ನಾಯ್ಡು, ಮುಂಬರುವ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌), ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪುರುಷರ ಫ್ಲೋರ್‌ ವಿಭಾಗದ ಆಯ್ಕೆ ಟ್ರಯಲ್ಸ್‌ನಲ್ಲಿ ಉಜ್ವಲ್‌ ಉತ್ತಮ ಸಾಮರ್ಥ್ಯ ತೋರಿದರು. ಮಾರ್ಚ್‌ 20ರಿಂದ 23ರವರೆಗೆ ದೋಹಾದಲ್ಲಿ ವಿಶ್ವಕಪ್‌ ಆಯೋಜನೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.