ಸ್ನೂಕರ್‌: ಮ್ಯಾಥ್ಯೂಗೆ ಪ್ರಶಸ್ತಿ ಕೊಚ್ಚಿ: ಇಂಗ್ಲೆಂಡ್‌ನ ಮ್ಯಾಥ್ಯೂ ಸೆಲ್ಟ್‌, ಇಂಡಿಯನ್‌ ಓಪನ್‌ ವಿಶ್ವ ರ‍್ಯಾಂಕಿಂಗ್‌ ಸ್ನೂಕರ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಸೆಲ್ಟ್‌ 5–3 ಫ್ರೇಮ್‌ಗಳಿಂದ ಲಿಯು ಹಾವೊಟಿಯನ್‌ ಅವರನ್ನು ಮಣಿಸಿದರು. ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್‌ನಲ್ಲಿ ಸೆಲ್ಟ್‌ 4–2ರಲ್ಲಿ ಹಾಲಿ ಚಾಂಪಿಯನ್‌ ಜಾನ್ ಹಿಗ್ಗಿನ್ಸ್‌ಗೆ ಆಘಾತ ನೀಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.