ಈಜು ಕೋಚ್‌ ಬಾಲರಾಜು ನಿಧನ ಬೆಂಗಳೂರು: ಕರ್ನಾಟಕದ ಹಿರಿಯ ಈಜು ಮತ್ತು ಡೈವಿಂಗ್‌ ವಿಭಾಗದ ಕೋಚ್‌ ಜಿ.ಆರ್‌.ಬಾಲರಾಜು (72) ಬುಧವಾರ ಮುಂಜಾನೆ ಹೃದಯ ಸ್ಥಂಭನದಿಂದ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಅವರು ಐದು ದಿನಗಳಿಂದ ಕಮಾಂಡೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಾಲರಾಜು ಅವರು ಡೈವಿಂಗ್‌ ವಿಭಾಗದ ನುರಿತ ಕೋಚ್‌ ಆಗಿದ್ದರು. ಅವರ ಬಳಿ ತರಬೇತಿ ಪಡೆದಿದ್ದ ರಾಜ್ಯದ ಅನೇಕ ಈಜುಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕೋಚ್‌ ಆಗಿ ಸೇವೆ ಸಲ್ಲಿಸಿದ್ದ ಬಾಲರಾಜು, ಕರ್ನಾಟಕ ಈಜು ಸಂಸ್ಥೆಯ ಆಜೀವ ಸದಸ್ಯರಾಗಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.