ಸೋಧಿ ಸ್ಪ್ರಿಂಟ್‌ ರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌ಷಿಪ್‌: ಸಾವನ್‌ಗೆ ಪ್ರಶಸ್ತಿ ಹೈದರಾಬಾದ್‌: ಬೆಂಗಳೂರಿನ ಸಾವನ್‌ ಸತ್ಯನಾರಾಯಣ್‌ ಅವರು ಎರಡನೇ ಸುತ್ತಿನ ಸೋದಿ ಕಾರ್ಟ್‌ ಸ್ಪ್ರಿಂಟ್‌ ರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌ ಷಿಪ್‌ನ ಪ್ರಶಸ್ತಿ ಜಯಿಸಿದ್ದಾರೆ. ಭಾನುವಾರ ರಾತ್ರಿ ನಡೆದ ರೇಸ್‌ ನಲ್ಲಿ ಅವರು 9 ನಿಮಿಷ 13.764 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಹೈದರಾಬಾದ್‌ನ ಅದೀತ್‌ ಪ್ರಾಶರ್‌ (9 ನಿಮಿಷ 16.36 ಸೆ) ಎರಡನೇ ಸ್ಥಾನ ಗಳಿಸಿದರು. ಕೊಚ್ಚಿಯ ಅಶ್ವಿನ್‌ ಎಂ.ನಾಯರ್‌ (9 ನಿಮಿಷ 17.070 ಸೆ) ಮೂರನೇ ಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.