ಭಾರತ ಜಯಭೇರಿ ಬಿರಾತ್ ನಗರ, ನೇಪಾಳ: ಮಹಿಳೆಯರ ಸ್ಯಾಫ್‌ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಭರ್ಜರಿ ಆರಂಭ ಕಂಡಿದೆ. ಇಲ್ಲಿನ ಸಾಹಿದ್ ರಂಗಶಾಲ ಕ್ರೀಡಾಂಗಣದಲ್ಲಿ ಬುಧವಾರ ಮಾಲ್ಡಿವ್ಸ್‌ ಎದುರು ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಭಾರತ 6–0ಯಿಂದ ಗೆದ್ದಿತು. ಡಂಗಮೆ ಗ್ರೇಸ್‌, ಸಂಧ್ಯಾ ರಂಗನಾಥನ್‌, ಸಂಜು, ಇಂಧುಮತಿ ಕದಿರೇಶನ್‌ ಮತ್ತು ರತನ್‌ಬಾಲಾ ದೇವಿ ಭಾರತಕ್ಕೆ ಗೋಲು ತಂದಿತ್ತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.