ಹಾಕಿ: ಫೈನಲ್‌ಗೆ ಇಂಡಿಯನ್‌ ಆಯಿಲ್‌ ಮುಂಬೈ: ಬೆಂಗಳೂರಿನ ಇಂಡಿಯನ್‌ ಆಯಿಲ್‌ ತಂಡದವರು ಬಾಂಬೆ ಗೋಲ್ಡ್‌ ಕಪ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಮಹೀಂದ್ರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಇಂಡಿಯನ್‌ ಆಯಿಲ್‌ 7–2 ಗೋಲುಗಳಿಂದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ತಂಡವನ್ನು ಮಣಿಸಿತು. ವಿಜಯೀ ತಂಡದ ದೀಪಕ್‌ ಠಾಕೂರ್‌ ಎರಡು ಗೋಲು ಗಳಿಸಿ ಮಿಂಚಿದರು. ಸುನೀಲ್‌ ಯಾದವ್‌, ಅರ್ಮಾನ್‌ ಖುರೇಷಿ, ತಲ್ವಿಂದರ್‌ ಸಿಂಗ್‌, ಮೊಹಮ್ಮದ್‌ ರಾಹೀಲ್ ಮತ್ತು ನೀಲಮ್‌ ಸಂಜಯ್‌ ಅವರು ತಲಾ ಒಮ್ಮೆ ಚೆಂಡನ್ನು ಗುರಿ ತಲುಪಿಸಿ ಗೆಲುವಿನ ಅಂತರ ಹೆಚ್ಚಿಸಿದರು. ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಜಲಂಧರ್‌ನ ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್‌ 2–1 ಗೋಲುಗಳಿಂದ ಸೌತ್‌ ಸೆಂಟ್ರಲ್‌ ರೈಲ್ವೆ ಎದುರು ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.