ಬ್ಯಾಡ್ಮಿಂಟನ್‌: ಮುಖ್ಯ ಸುತ್ತಿಗೆ ಮುಖರ್ಜಿ ಬಾಸೆಲ್‌, ಸ್ವಿಟ್ಜರ್‌ಲೆಂಡ್‌ : ಭಾರತದ ರಿಯಾ ಮುಖರ್ಜಿ, ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮುಖ್ಯ ಸುತ್ತು ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಅರ್ಹತಾ ಹಂತದ ಹಣಾಹಣಿಯಲ್ಲಿ ರಿಯಾ 21–15, 21–10ರಲ್ಲಿ ಹಂಗರಿಯ ಲೌರಾ ಸರೋಸಿ ಅವರನ್ನು ಮಣಿಸಿದರು. ಪ್ರಧಾನ ಹಂತದ ಮೊದಲ ಸುತ್ತಿನ ಹೋರಾಟದಲ್ಲಿ ರಿಯಾ, ಲಿಂಡಾ ಜೆತ್‌ಚಿರಿ ಎದುರು ಸೆಣಸಲಿದ್ದಾರೆ. ಪುರುಷರ ಡಬಲ್ಸ್‌ ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪ್ರಣವ್‌ ಜೆರಿ ಚೋಪ್ರಾ ಮತ್ತು ಚಿರಾಗ್‌ ಶೆಟ್ಟಿ 21–15, 17–21, 21–19ರಲ್ಲಿ ಚೀನಾ ತೈಪೆಯ ಲೀ ಫಾಂಗ್‌ ಚಿಹ್‌ ಮತ್ತು ಲು ಚಿಯಾ ಪಿನ್‌ ಎದುರು ಗೆದ್ದರು. ಇನ್ನೊಂದು ಪೈಪೋಟಿಯಲ್ಲಿ ಕೃಷ್ಣ ಪ್ರಸಾದ್‌ ಗರಗ ಮತ್ತು ಧ್ರುವ ಕಪಿಲಾ 21–17, 19–21, 21–18ರಲ್ಲಿ ಜರ್ಮನಿಯ ಜಾರ್ನೆ ಗೆಯಿಸ್‌ ಮತ್ತು ಜಾನ್‌ ಕಾಲಿನ್‌ ವೊಲ್ಕರ್‌ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.