ಬ್ಯಾಸ್ಕೆಟ್‌ಬಾಲ್‌: ರಾಮಯ್ಯ ತಂಡಕ್ಕೆ ಪ್ರಶಸ್ತಿ ಸಂಭ್ರಮ ಬೆಂಗಳೂರು: ನಗರದ ರಾಮಯ್ಯ ತಾಂತ್ರಿಕ ಸಂಸ್ಥೆಯ ತಂಡ, ಮಣಿಪಾಲದಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಪ್ರಶಸ್ತಿ ಗೆದ್ದಿತು. ಬಿಎಂಎಸ್‌ಸಿಇ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ರಾಮಯ್ಯ ಸಂಸ್ಥೆ 62–32ರಿಂದ ಗೆದ್ದಿತು. 15 ಪಾಯಿಂಟ್ ಗಳಿಸಿದ ಅಶುತೋಷ್‌ ಸಾಹು ಮತ್ತು 12 ಪಾಯಿಂಟ್ ಕಲೆ ಹಾಕಿದ ದೇವ್‌ ಮಿಶ್ರಾ ಅವರು ರಾಮಯ್ಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಿಎಂಎಸ್‌ಸಿಇ ಪರ ಗೌರವ್‌ ಮತ್ತು ಸಂಜಯ್ ತಲಾ 12 ಪಾಯಿಂಟ್ ಗಳಿಸಿದರು. ಸೆಮಿಫೈನಲ್‌ನಲ್ಲಿ ರಾಮಯ್ಯ ತಂಡ 47–35ರಿಂದ ತಮಿಳುನಾಡಿನ ಎಸ್‌ಆರ್‌ಎಂ ವಿರುದ್ಧ ಗೆದ್ದಿತು. ರಾಮಯ್ಯ ಪರ ಸಾಯಿ ಮಾಧವ್‌ 15 ಮತ್ತು ಪ್ರಭಾತ್‌ 10 ಪಾಯಿಂಟ್ ಗಳಿಸಿದರು. ಎಸ್‌ಆರ್‌ಎಂಗಾಗಿ ಅಶ್ವಿನ್‌ 10 ಪಾಯಿಂಟ್ ಕಲೆ ಹಾಕಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.