ವಲಯಮಟ್ಟದ ಕೊಕ್ಕೊ: ಎಸ್‌ಜಿಬಿಐಟಿ ಚಾಂಪಿಯನ್ ಬೆಳಗಾವಿ: ಇಲ್ಲಿನ ಎಸ್‌ಜಿಬಿಐಟಿ ತಂಡವು ಹಳಿಯಾಳದ ಕೆಎಲ್‌ಎಸ್ ಸಂಸ್ಥೆಯ ವಸಂತರಾವ್‌ ದೇಶಪಾಂಡೆ ತಾಂತ್ರಿಕ ಕಾಲೇಜಿನಲ್ಲಿ ಈಚೆಗೆ ನಡೆದ ವಿಟಿಯು ವಲಯಮಟ್ಟದ ಪುರುಷರ ಕೊಕ್ಕೊ ಟೂರ್ನಿಯಲ್ಲಿ ಚಾಂಪಿಯನ್‌ ಆಯಿತು. ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಿದ್ದವು. ಮೊದಲಿಗೆ ಬೆಳಗಾವಿಯ ಜೈನ್‌ ಎಂಜಿನಿಯರಿಂಗ್‌ ಕಾಲೇಜಿನೊಡನೆ ಪಂದ್ಯದಲ್ಲಿ ಜಯಸಿ, ನಂತರ ಲಕ್ಷ್ಮೇಶ್ವರದ ಎಸ್‌ಕೆಎಸ್‌ವಿಎಂಎಸಿಇಟಿ ಕಾಲೇಜು ತಂಡದೊಡನೆ ತೀವ್ರ ಸೆಣಸಾಟದಲ್ಲಿ ಜಯ ಗಳಿಸಿ ಉಪಾಂತ್ಯ ತಲುಪಿತು. ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು ತಂಡದ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿತು. ಅಂತಿಮ ಲೀಗ್ ಹಂತದ ಪಂದ್ಯದಲ್ಲಿ ಹಳಿಯಾಳದ ವಸಂತರಾವ ದೇಶಪಾಂಡೆ ತಾಂತ್ರಿಕ ಕಾಲೇಜಿನ ವಿರುದ್ಧ ಮೇಲುಗೈ ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಬಳಿಕ ಮಂಡ್ಯದ ಬಿಜಿಎಸ್‌ಐಟಿ ಕಾಲೇಜಿನಲ್ಲಿ ನಡೆದ ರಾಜ್ಯ ವಲಯ ಮಟ್ಟದ ಪಂದ್ಯದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಕಾಲೇಜು ತಂಡವೂ ಪಾಲ್ಗೊಂಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.