14ರಿಂದ ಹಾಕಿ ಚಾಂಪಿಯನ್ಸ್ ಟ್ರೋಫಿ ಮಡಿಕೇರಿ: ಏಪ್ರಿಲ್ 14ರಿಂದ ಮೇ 12ರವರೆಗೆ ಚಾಂಪಿಯನ್ಸ್ ಟ್ರೋಫಿ ಹಾಗೂ ಹಾಕಿ ಚಾಂಪಿಯನ್‌ಷಿಪ್ –2019 ಅನ್ನು ಕಾಕೋಟುಪರಂಬು ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹಾಕಿ ಕೂರ್ಗ್ ಅಧ್ಯಕ್ಷ ಎಂ.ಪಿ. ಸುಬ್ಬಯ್ಯ ತಿಳಿಸಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು 11 ತಂಡಗಳು ಆಯ್ಕೆಯಾಗಿದ್ದು, ಒಂದು ತಂಡವನ್ನು ಶೀಘ್ರ ಆಯ್ಕೆ ಮಾಡಲಾಗುವುದು. ಚಾಂಪಿಯನ್‌ಷಿಪ್‌ಗೆ 65 ತಂಡ ನೋಂದಣಿ ಮಾಡಿಸಿಕೊಂಡಿವೆ ಎಂದರು. ಕೊಡಗಿನಲ್ಲಿ ಯಾವುದೇ ರೀತಿಯ ಹಾಕಿ ಆಟ ನಡೆಸಲು ಹಾಕಿ ಕೂರ್ಗ್‌ನಿಂದ ಅನುಮತಿ ಪಡೆಯಬೇಕು. ಹಾಕಿ ಕೂರ್ಗ್ ಅನುಮತಿ ಇಲ್ಲದೇ ಪಂದ್ಯಾವಳಿ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಚಂಗಪ್ಪ, ಲವ ಹಾಗೂ ನವೀನ್ ಬೆಳ್ಯಪ್ಪ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.