ಗಾಲ್ಫ್‌ ಅಕಾಡೆಮಿ ಉದ್ಘಾಟನೆ ಬೆಂಗಳೂರು: ಶುಕ್ರವಾರ ಶತಮಾ ನೋತ್ಸವ ಆಚರಿಸಿಕೊಂಡ ಬೆಂಗ ಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌ (ಬಿಯುಸಿಸಿ) ಮತ್ತು ಕರ್ನಾಟಕ ಗಾಲ್ಫ್ ಸಂಸ್ಥೆಯ ಆಶ್ರಯದಲ್ಲಿ ಗಾಲ್ಫ್‌ ಡೇ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಿಯುಸಿಸಿ ಅಧ್ಯಕ್ಷ ರಾಹುಲ್ ದ್ರಾವಿಡ್,ಜೂನಿಯರ್ ಗಾಲ್ಫ್ ಅಕಾಡೆಮಿ ಉದ್ಘಾಟಿಸಿದರು. ‘ಯಾವುದೇ ಕ್ರೀಡೆ ಇರಲಿ. ಶಿಸ್ತು ಮತ್ತು ಬದ್ಧತೆಯಿಂದ ಅಭ್ಯಾಸ ಮಾಡಿ ದರೆ ಉತ್ತಮ ಸಾಧನೆ ಮಾಡುವುದು ಸಾಧ್ಯ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೆಜಿಎ ಅಧ್ಯಕ್ಷ ಹರೀಶಕುಮಾರ್ ಶೆಟ್ಟಿ ಮತ್ತಿತರರು ಹಾಜರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.