ಟಾಪ್‌ನಿಂದ ರಿತು ಪೋಗಟ್‌ ಹೊರಗೆ ನವದೆಹಲಿ: ಕುಸ್ತಿಪಟು ರಿತು ಪೋಗಟ್ ಅವರನ್ನು ಕೇಂದ್ರ ಸರ್ಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ (ಟಾಪ್ಸ್‌)ಯಿಂದ ಕೈಬಿಡಲಾಗಿದೆ. ರಿತು ಅವರು ಈಚೆಗೆ ಮಿಕ್ಸ್‌ ಮಾರ್ಷಲ್ ಆರ್ಟ್ಸ್‌ (ಎಂಎಂಎ) ತರಬೇತಿಗೆ ಸೇರಿಕೊಂಡಿದ್ದಾರೆ. ಆದ್ದರಿಂದ ಅವರು ಕುಸ್ತಿ ಕ್ರೀಡೆಯಿಂದ ಹೊರನಡೆದಿದ್ದಾರೆ. ಇದರಿಂದಾಗಿ ಅವರು 2020ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದಿಲ್ಲ. ಆದ್ದರಿಂದ ಅವರನ್ನು ಟಾಪ್ಸ್‌ನಿಂದ ಕೈಬಿಡಲಾಗಿದೆ ಎಂದು ಭಾರತ ಕ್ರೀಡಾ ಪ್ರಾಧಿಕಾರ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.